About Us

ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೇ ಹೆಸರುವಾಸಿಯಾಗಿದೆ . ರಾಜಾಶ್ರಯದಿಂದಾಗಿ ಹಲವಾರು ಕಲೆಗಳು ಇಲ್ಲಿ ಉಚ್ಚಾಯ ಸ್ಥಿತಿಯಲ್ಲಿದ್ದವು . ಆದರೆ ಇಂದು ಕಲೆಯಬೀಡಿನಲ್ಲಿ , ಎಲ್ಲಾ ಕಲೆಗಳೂ , ಸಮೂಹ ಮಾಧ್ಯಮಗಳ ಪ್ರಭಾವದಿಂದಾಗಿ ಅವನತಿ ಹೊಂದುತ್ತಿವೆ . ಇಂಥ ಪರ್ವಕಾಲದಲ್ಲಿ , ರಾಜ್ಯಕ್ಕೆ , ಅಷ್ಟೇ ಅಲ್ಲ , ಇಡೀ ರಾಷ್ಟ್ರಕ್ಕೆ ಒಂದು ಅಸ್ಮಿತೆಯನ್ನು ನೀಡಿರುವ ಈ ಸಾಂಪ್ರದಾಯಿಕ ಅಭಿಜಾತ ಕಲೆಯ ಮಹಾನ್ ಪರಂಪರೆಯನ್ನು ಜತನವಾಗಿ ಉಳಿಸಿ , ಬೆಳೆಸಿ , ಮುಂದಿನ ಪೀಳಿಗೆಗೆ ತಲುಪಿಸಬೇಕಾದ ಹೊಣೆಗಾರಿಕೆ ನಮ್ಮ ನಿಮ್ಮಂತಹ ಎಲ್ಲಾ ಸಂಗೀತ ಪ್ರೇಮಿಗಳ ಮೇಲಿದೆ . ಎಸ್‌ಪಿವಿಜಿಎಂಸಿ ಟ್ರಸ್ಟ್ ಐವತ್ತೇಳು ವರ್ಷಗಳಿಂದ ಸಾಂಸ್ಕೃತಿಕ ಹರಿಕಾರನ ಹೊಣೆಗಾರಿಕೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದೆ . ಅಭಿಜಾತ ಸಂಗೀತವನ್ನು ಜನರು ಸಮರ್ಥವಾಗಿ ಒಯ್ಯುವ ಒಂದು ಪ್ರಮುಖ ವೇದಿಕೆಯಾಗಿದೆ . ಕರ್ನಾಟಕ ಹಾಗೂ ಹಿಂದುಸ್ತಾನಿ ಸಂಗೀತದ ದಿಗ್ಗಜರೆಲ್ಲಾ ಈ ವೇದಿಕೆಯಲ್ಲಿ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ . ಅದೇ ರೀತಿಯಲ್ಲಿ ಕರ್ನಾಟಕದ ಹಲವಾರು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ . ಈ ರೀತಿ ಹಲವು ಕಡೆಗಳಿಂದ ದೊರಕಿದ ಸಹಕಾರದಿಂದ ಈ ಸಂಸ್ಥೆಗೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗಿದೆ . ಐವತ್ತೇಳು ವರ್ಷಗಳ ನಿರಂತರ ಸೇವೆಯ ನಂತರ ಈ ವರ್ಷ 58ನೇಯ ಪಾರಂಪರಿಕ ಸಂಗೀತೋತ್ಸವವನ್ನು ಹಮ್ಮಿಕೊಳ್ಳಲಾಗಿದೆ . ಪ್ರತಿ ವರ್ಷದಂತೆ ಹಿರಿಯ ಕಿರಿಯರೆಲ್ಲಾ ಒಟ್ಟಾಗಿ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ . ನಿಮ್ಮಂತಹ ದಾನಿಗಳ ಕಲಾರಸಿಕರ ಔದಾರ್ಯವನ್ನು ನೆಚ್ಚಿಕೊಂಡೇ ನಮ್ಮ ಸಂಸ್ಥೆ ಇಷ್ಟು ವರ್ಷಗಳು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ . ನಿಮ್ಮ ಸಹಕಾರವನ್ನು ವಿಶ್ವಾಸಪೂರ್ವಕವಾಗಿ ನೆನೆಯುತ್ತಾ , ಮತ್ತೆ ತಾವೆಲ್ಲರೂ ಆರ್ಥಿಕ ಔದಾರ್ಯವನ್ನು ತೋರಿ ನಮ್ಮ ಸಂಸ್ಥೆಯನ್ನು ಮುಂದಕ್ಕೆ ನಡೆಸಿಕೊಂಡು ಹೋಗಿ , ಈ ನೆಲದ ಅಮೂಲ್ಯ ಕಲಾಪರಂಪರೆಯನ್ನು ಕಾಪಾಡುವ ನಿಟ್ಟಿನಲ್ಲಿ ತಮ್ಮ ಸಹಾಯಹಸ್ತ ಚಾಚಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇವೆ .

Constitution of the Trust

Patron

Sri. Vasu, Ex. MLA

President

Sri M. Jagannath Shenoi

Vice-President

Sri Venugopal T S

Secretary

Sri C. R. Himamshu

Treasurer

Sri R. Gururaj

Trustees

Smt Shylaja

Trustees

Sri Amaresh Das

Trustees

Sri Sridhar M K

Trustees

Sri Vasanth

Trustees

Sri Cheluvaraj